ಜೀವನ ಶೈಲಿ ಸರಿಯಾಗಿಲ್ಲದೆ ಇರುವ ಕಾರಣದಿಂದಾಗಿ ಬಗೆಬಗೆಯ ಕಾಯಿಲೆಗಳು ತಮ್ಮ ಶೌರ್ಯ, ಪ್ರತಾಪಗಳನ್ನು ಸಾಮಾನ್ಯ ಜನರ ಮೇಲೆ ತೋರಿಸಿಕೊಳ್ಳುತ್ತವೆ. ಆ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿ.
ಕ್ಯಾನ್ಸರ್ ಕಾರಕ ಆಹಾರ
ರುಚಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಪದ್ಧತಿ ಮುಂದುವರಿಯುತ್ತಿರುವುದರಿಂದ ಇದು ನಾನಾ ರೀತಿಯ ಅನಾರೋಗ್ಯಗಳಿಗೆ ಕಾರಣವಾಗುತ್ತಿದೆ. ಅನಾರೋಗ್ಯಕಾರ ಪರಿಸ್ಥಿತಿ ಬರುವರೆಗೆ ಆರೋಗ್ಯದ ಬಗ್ಗೆ ಸರಿಯಾದ ಆಸಕ್ತಿ ವಹಿಸುವುದಿಲ್ಲ. ಅನಾರೋಗ್ಯವನ್ನುಂಟು ಮಾಡುವ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುವುದಿಲ್ಲ. ಉಪ್ಪು, ಸಂಗ್ರಹಗೊಂಡ ಹಳೆಯ ಪದಾರ್ಥಗಳು, ಕರಿದ ಪದಾರ್ಥಗಳ ಸೇವನೆ, ಹೊಟ್ಟೆಯೊಳಗೆ ಅಲ್ಸರ್ ಆಗುವುದಕ್ಕೆ ಕಾರಣವಾಗುತ್ತದೆ. ಆ ಅಲ್ಸರ್ಗಳು ನಂತರ ಕ್ಯಾನ್ಸರ್ ರೂಪಕ್ಕೆ ಬಂದುಬಿಡುತ್ತವೆ. ಸೋಡಾ, ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ ಎನ್ನುವುದು ಗೊತ್ತಿದ್ದರೂ ಕೆಲವರು ಅದರ ಸೇವನೆಯನ್ನು ಬಿಡುವುದಿಲ್ಲ. ಫ್ರೆಂಚ್ ಫ್ರೈಸ್, ಚಿಪ್ಸ್, ಸ್ನಾಕ್ಸ್ ನಂತಹ ಪದಾರ್ಥಗಳು, ಪಾನೀಯಗಳು ಕ್ಯಾನ್ಸರ್ ಗೆ ಪ್ರಮುಖ ಕಾರಣಗಳು.ಕ್ಯಾನ್ಸರ್ ನಿಯಂತ್ರಕ ಆಹಾರ ಪದಾರ್ಥಗಳು
ಕ್ಯಾನ್ಸರ್ ಗಳಲ್ಲಿ ಬಗೆಬಗೆಯ ಕ್ಯಾನ್ಸರ್ ಗಳಿರುವಂತೆ ಅವುಗಳಿಗೆ ಸಂಬಧಿಸಿದಂತೆ ಸೇವಿಸುವ ಪೋಷಕಾಂಶಗಳಿರುವ ಆಹಾರ ಪದಾರ್ಥಗಳನ್ನು ಬದಲಾಯಿಸಬೇಕಾಗುತ್ತದೆ.ಕಿಮೋಥೆರಪೀ ಯಲ್ಲಿ ಕ್ಯಾಲೋರಿಗಳು, ಪ್ರೊಟೀನ್ ಗಳು ಅಗತ್ಯ ಪ್ರಮಾಣದಲ್ಲಿರುವಂತೆ ಗಮನಿಸಿಕೊಳ್ಳಬೇಕು. ಅಂತಹ ಚಿಕಿತ್ಸೆಯಲ್ಲಿ ಪಿತ್ತ ವಿಕಾರ, ವಾಂತಿ, ಭೇದಿಗಳು ಆಗಬಹುದು. ಅದಕ್ಕೆಂದೇ ಅಂತಹ ರೋಗಿಗಳು ಹಗುರವಾದ ಆಹಾರ ಸೇವಿಸಬೇಕು.
ಮೊಟ್ಟೆ, ಹಾಲು, ಚೀಸ್, ಕಾಟೇಜ್ ಮೊಸರು, ಬೀನ್ಸ್, ಸೋಯ, ಬಾದಾಮಿ, ಕಡಲೆಕಾಯಿ, ಪೀನಟ್, ಬಟ್ಟರ್, ಮುಂತಾಡುವಲ್ಲಿ ಯಥೇಚ್ಚವಾದ ಪ್ರೊಟೀನ್ಗಳು ಇರುತ್ತವೆ. ಜೊತೆಗೆ ಇವೆಲ್ಲವೂ ಸುಲಭವಾಗಿ ಜೀರ್ಣಗೊಳ್ಳುತ್ತವೆ.
ವಿಟಮಿನ್ ಸಿ ಯಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಇರುವುದರಿಂದ ಅವುಗಳು ರೋಗ ನಿರೋಧಕ ಶಕ್ತಿ ಯನ್ನು ವೃದ್ಧಿಪಡಿಸುತ್ತವೆ. ಕಿತ್ತಳೆ, ಮೂಸಂಬಿ, ನಿಂಬೆ, ಪರಂಗಿ ಹಣ್ಣು, ಸ್ಟ್ರಾಬೆರ್ರೀ, ಬ್ರಕೋಲಿ, ಪೈನಾಪಲ್, ದ್ರಾಕ್ಷಿ, ಅಪ್ರಿಕಾಟ್, ಪೀಚ್ ಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತವೆ.
ಕಿಮೋಥೆರಪೀ ಮಾಡಿಸಿಕೊಳ್ಳುವುದರಿಂದ ಹಸಿವು ಮಂಡಗೊಳ್ಳುವುದರಿಂದ ದೇಹತೂಕ ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತೂಕ ಕಳೆದುಕೊಳ್ಳುವುದರಿಂದ ನಿಶ್ಶಕ್ತಿ, ಬೇಸರ, ದುಗುಡ ಗಳಂತಹವು ಹೆಚ್ಚಾಗುತ್ತವೆ. ಕ್ಯಾನ್ಸರ್ ಗೆ ಬಳಸುವ ಔಷಧಿಗಳನ್ನು ಸೇವಿಸುವ ಸಮಯದಲ್ಲಿ ಪೋಷಕಾಂಶಗಳು ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಯಥೇಚ್ಛವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಕ್ಯಾನ್ಸರ್ ವ್ಯಾಧಿಗ್ರಸ್ತರು ಕ್ಯಾಲೋರಿಗಳು ಹೆಚ್ಚಾಗಿರುವ ಪದಾರ್ಥಗಳನ್ನು ಸೇವಿಸಬೇಕು.
ಉದಾಹರಣೆಗೆ ಮಿಶ್ರ ಹಣ್ಣುಗಳು, ಮಿಲ್ಕ್ ಶೇಕ್ ನಂತಹವು. ಚಿಕಿತ್ಸೆ ನಡೆಯುತ್ತಿರುವಾಗ ರಸಗ್ರಂಥಿಗಳು ರುಚಿಯ ಸಾರವನ್ನು ಗ್ರಹಿಸಬಲ್ಲ ಶಕ್ತಿ ಕಳೆದುಕೊಳ್ಳುತ್ತವೆ.ಅದರಿಂದಾಗಿ ಸೇವಿಸುವ ಆಹಾರದಲ್ಲಿ ರುಚಿಗಾಗಿ ಉಪ್ಪು, ದಾಲ್ಚಿನ್ನಿ, ಚಕ್ಕೆಪುಡಿ, ಏಲಕ್ಕಿ ಪುಡಿ ಚಿಮುಕಿಸಿಕೊಳ್ಳಬಹುದು.
ಎಲ್ಲ ಬಗೆಯ ಕ್ಯಾನ್ಸರ್ ಗಳಿಗೆ ಒಂದೇ ರೀತಿಯ ಆಹಾರ ಸೇವಿಸುವಂತೆ ಹೇಳುವುದು ಸಾಧ್ಯವಿಲ್ಲ. ವ್ಯಾಧಿಗೆ ತಕ್ಕಂತೆ ಯಾವ ಆಹಾರ ಸೇವಿಸಬೇಕು ಎನ್ನುವುದನ್ನು ಆ ಸಂದರ್ಭದಲ್ಲಿ ಪೋಷಕಾಹಾರ ತಜ್ನರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆಯುವುದು ಉತ್ತಮ.
ಮೂಲ ಲೇಖನ:ಆರೋಗ್ಯ ಅನುರಾಗ - ಜನವರಿ 2014


No comments:
Post a Comment